Index   ವಚನ - 130    Search  
 
ಸ್ಥಾವರವೆಂತಂತೆ ಮನದಲ್ಲಿ ಭಾವಿಸಿ, ಸಕಲಜೀವದ ನಿಂದೆಯ ಮಾಬುದು. ಲಿಂಗಜಂಗಮವೊಂದೆಯೆಂದು ನಂಬೂದು. ಬಂದುದು ಲಿಂಗಾಧೀನವೆಂದು ಕಾಬುದು. ಸತ್ಯವ ನುಡಿವುದು, ಶುಚಿಯಾಗಿಪ್ಪುದು. ಎರಡುವಿಡಿಯದೆ, ಎರಡು ನಡೆಯದೆ, ಮುನ್ನಾದಿಯ ಪುರಾತರು ಕೂಡಿದ ಪಥವಿದು, ಸಕಳೇಶ್ವರದೇವರನೊಲಿಸಿಹೆನೆಂಬವಂಗೆ.