Index   ವಚನ - 67    Search  
 
ಮನಕ್ಕೆ ಮನವೇಕಾರ್ಥವಾಗಿ, ಕಾಯಕ್ಕೆ ಕಾಯ ಸಂಬಂಧವಾಗಿ, ಪ್ರಾಣಕ್ಕೆ ಪ್ರಾಣ ಸಮದರ್ಶನವಾಗಿದ್ದವರಲ್ಲಿ ತೆರೆಮರೆಯಂಬುದಿಲ್ಲ ನೋಡಯ್ಯಾ, ಸಂಗ ನಿಸ್ಸಂಗವಾಗಿಪ್ಪವರಲ್ಲಿ ಉಪಚರ್ಮಕ್ಕೆ ಇಂಬಿಲ್ಲ ನೋಡಯ್ಯಾ, ಬಸವಪ್ರಯ ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನಟ್ಟಿದನು, ಕೃಪೆಮಾಡಾ ಗುರುವೆ.