ಮಿಂಚುಬುಳು ಒಮ್ಮೆ ಪ್ರಚಂಡ
ತೇಜೋಮಯ ಸೂರ್ಯಂಗೆ
ಸರಿಯಾದಂದು, ಹರಿ ಹರಂಗೆ ಸರಿಯಹನು.
ಕಹಿಬೇವಿನ ಕೊರಡು ಬಾವನ್ನ ಶ್ರೀಗಂಧಕ್ಕೆ ಸರಿಯಾದಂದು,
ವಿರಿಂಚಿ ಗಿರೀಶಂಗೆ ಸರಿಯಹನು.
ಅಜ್ಞಾನ ಸುಜ್ಞಾನಕ್ಕೆ ಸರಿಯಾದಂದು, ವಜ್ರಪಾಣಿ ಮೊದಲಾದ
ದೇವ ದಾನವ ಮಾನವರು ಶೂಲಪಾಣಿಗೆ ಸರಿಯಹರು.
ಏನ ಹೇಳುವೆ, ಅಜ್ಞಾನಿ ಜನರ ಅಜ್ಞಾನಪ್ರಬಲ ಚೇಷ್ಟೆಯನು?
ಅದೆಂತೆಂದಡೆ:
ಖದ್ಯೋತೋಯದಿ ಚಂಡಭಾನು ಸದೃಶಸ್ತುತ್ಯೋ ಹರಿಃ ಶಂಭುನಾ
ಕಿಂ ಕಾಷ್ಠಂ ಹರಿಚಂದನೇನ ಸದೃಶಂ ತುಲ್ಯೋಹಮೀಶೇನ ಚ |
ಅಜ್ಞಾನಂ ಯದಿ ವೇದನೇನ ಸದೃಶಂ ದೇವೇನ ತುಲ್ಯೋ ಜನಾ
ಕಿಂ ವಕ್ಷ್ಯೇ ಸುರಪುಂಗವಾ ಅಹಮಹೋಮೋಹಸ್ಯದುಶ್ಚೇಷ್ಟಿತಂ
ನಿಮಗೆ ಸರಿಯೆಂಬವರಿಗೆ ನರಕವೆ ಗತಿಯಯ್ಯಾ,
ಬಸವಪ್ರಿಯ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Min̄cubuḷu om'me pracaṇḍa
tējōmaya sūryaṅge
sariyādandu, hari haraṅge sariyahanu.
Kahibēvina koraḍu bāvanna śrīgandhakke sariyādandu,
virin̄ci girīśaṅge sariyahanu.
Ajñāna sujñānakke sariyādandu, vajrapāṇi modalāda
dēva dānava mānavaru śūlapāṇige sariyaharu.
Ēna hēḷuve, ajñāni janara ajñānaprabala cēṣṭeyanu?
Adentendaḍe:Khadyōtōyadi caṇḍabhānu sadr̥śastutyō hariḥ śambhunā
kiṁ kāṣṭhaṁ haricandanēna sadr̥śaṁ tulyōhamīśēna ca |
ajñānaṁ yadi vēdanēna sadr̥śaṁ dēvēna tulyō janā
kiṁ vakṣyē surapuṅgavā ahamahōmōhasyaduścēṣṭitaṁ
nimage sariyembavarige narakave gatiyayyā,
basavapriya kūḍalasaṅgamadēvā.