Index   ವಚನ - 73    Search  
 
ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರು? ಬಸವಣ್ಣನಲ್ಲದೆ. ಲಿಂಗಕ್ಕೆ ಆಧಾರವಿಲ್ಲವೆಂದು ಮತ್ರ್ಯಲೋಕಕ್ಕೆ ಬಂದು, ಅವತರಿಸಿದನಯ್ಯಾ ಬಸವಣ್ಣನು. ಲಿಂಗಮುಖ ಜಂಗಮವೆಂದರಿದು, ತನ್ನನರ್ಪಿಸಿ, ಇದಿರ ತಪ್ಪಿಸಿ ಇರಬಲ್ಲನಯ್ಯಾ ಬಸವಣ್ಣನು. ಅಂಗಮುಖವೆಲ್ಲ ನಷ್ಟವಾಗಿ, ಭೃತ್ಯಾಚಾರವೆ ತನುವಾಗಿರಬಲ್ಲನಯ್ಯಾ ಬಸವಣ್ಣನು. ಪ್ರಾಣನ ಕಳೆಯರತು ಜಂಗಮವೇ ಪ್ರಾಣವಾಗಿರಬಲ್ಲನಯ್ಯಾ ಬಸವಣ್ಣನು. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಆಚಾರವೇ ಪ್ರಾಣವಾಗಿಪ್ಪ ಸಂಗನಬಸವಣ್ಣನೆ ನಿಮಗೆ ಭಕ್ತನಯ್ಯಾ ಪ್ರಭುವೆ.