Index   ವಚನ - 79    Search  
 
ವೇದಂಗಳೆಲ್ಲವು ಶಿವಲಿಂಗಧಾರಣ ಮಾಡಿಸಿಕೊಂಡವೆಂದು ಹೇಳುತ್ತಿದೆ ವೇದ. ದೇವ ದಾನವ ಮಾನವ ಹರಿವಿರಿಂಚಿಗಳು ಮೊದಲಾಗಿ ಲಿಂಗವ ಪೂಜಿಸಿದರೆಲ್ಲರು ನೋಡಾ. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿರಿವರ್ಧನಂ | ಉರ್ವಾರುಕಮಿವ ಬಂಧನಾನ್‍ಮೃತ್ಯೋರ್ಮು ಕ್ಷೀಯ ಮಾಮೃತಾತ್ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.