Index   ವಚನ - 81    Search  
 
ವೇದವೆಂಬ ಅಂಜನವ ನೆಚ್ಚಿಕೊಂಡು, ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು. ನರಗುರಿಗಳೆತ್ತ ಬಲ್ಲರು ಹೇಳಾ? ಯಜುರ್ವೇದ: ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ ಶ್ರೀರುದ್ರಭಾಷ್ಯೇ: ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ | ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ | ನಯಾಮಸ ಶಿವಸಂಕಲ್ಪೋಪನಿಷದಿ ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು || ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ, ಕುರುಡಗೆ ಕನ್ನಡಿಯೇಕೋ, ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ?