Index   ವಚನ - 82    Search  
 
ಶಿವಂಗೆ ಅಜ ಹರಿ ಸುರರು ಸರಿಯೆಂದು ಮನದಲ್ಲಿದು ಹೊರವಂಟಡೆ, ಸ್ತುತಿಸಿದಡೆ, ಶಿವದ್ರೋಹಿ ಚಾಂಡಾಲ ಮಟ್ಟಲಾಗದೆಂದುದು ವೇದ. ಮಾತ್ವಾರುದ್ರಚುಕ್ರುಧಾ ಮಾನವಮೋಭಿರ್ಮಾ ದುಷ್ಟುತೀ ಭೂಷಭ ಮಾನಹುತೀ | ಉನ್ನೋ ವೀರಾಂ ಅರ್ಪಯ ಭೇಷಜೇ ಭಿರ್ಭಿಷಿಕ್ತಮಂ ತ್ವಾಂ ಭಿಷಜಾಂ ಶೃಣೋಮಿ || ಎಂದುದಾ ಶ್ರುತಿ. ಇದನರಿದರಿದು ಸರಿಯೆಂದು ನರಕಕ್ಕಿಳಿವಡೆ, ಕಾರಣವಲ್ಲದು, ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ.