Index   ವಚನ - 84    Search  
 
ಶಿವನ ಪ್ರಸಾದವಲ್ಲದೆ ಉಣಲಾಗದೆಂದುದು ವೇದ. ಶಿವನ ಪಾದೋಕವಲ್ಲದೆ ಕೊಳಲಾಗದೆಂದುದು ವೇದ. ಜಾಬಾಲ ಶಾಖಾಯಾಂ: ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ನಂತಿ | ತಸ್ಮಾದ್ಬ್ರಾಹ್ಮಣಾಃ ಪ್ರಶಾಂತಮನಸಃ ನಿರ್ಮಾಲ್ಯಮೇವ ಭಕ್ಷಯಂತಿ ನಿರ್ಮಾಲ್ಯಮೇವಸ್ನಪತಿ || ಎಂದುದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.