Index   ವಚನ - 86    Search  
 
ಶಿವಲಿಂಗದೇವರ ಪೂಜಿಸದೆ ಉಂಬವರೆಲ್ಲರೂ ಹೆಣನ ಮಲವನು ಒಂದಾಗಿಯೆ ತಿಂಬರಯ್ಯಾ, ಅಲ್ಲಿ ಏನೂ ಸಂದೇಹವಿಲ್ಲಾಗಿ. ಶಿವಧರ್ಮ: ಯಸ್ತು ಲಿಂಗಾರ್ಚನಂ ತ್ಯಕ್ತ್ವಾಭುಙ್ತೀ ಕ್ರಿಮಿಕೀಟಮಾಂಸಾನ್ | ನರೋ ನರಕಗಾಮೀ ಸ್ಯಾತ್ಸರ್ವಲೋಕ ಬಹಿಷ್ಕೃತಃ || ಅಕೃತ್ವಾ ಪೂಜನಂ ಶಂಭೋ ಯೋ ಭುಙ್ತೀ ಪಾಪಕೃದ್ವಿಜಃ | ಕುಣಪಂ ಚಮಲಂ ಚೈವ ಸಮಶ್ನಾತಿ ದಿನೇ ದಿನೇ || ಎಂದುದಾಗಿ, ಇದು ಕಾರಣ, ನಿಮ್ಮ ನಂಬಲರಿಯದ ಪಾಪಿಗಳಿಗೆ ಎಂದೆಂದಿಗೂ ನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.