ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ,
ಇಹಪರಂಗಳಿಗೆ
ಒಳಗಾದ ವಿಚಾರವೆಂತೆಂದಡೆ
ಸತ್ಯಸದಾಚಾರಸಂಪತ್ತೆಂಬ
ಶಿವಭಕ್ತರ ಹೃದಯದಲ್ಲಿ ಜನಿತನಾಗಿ
ಸತ್ಯನಡೆ ನಡೆಯದೆ,
ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ
ವರ್ತಿಸುವುದ ಕಂಡು ಅದ ಪರಿಹರಿಸದೆ,
ದ್ರವ್ಯದಭಿಲಾಷೆಯಿಂದ
ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು
ಹುಟ್ಟಂಧಕನೆಂಬೆನಯ್ಯಾ.
ಅಂತಪ್ಪ ಪರಮಪಾತಕಂಗೆ ಜಪವ ಹೇಳಿ,
ಪಾದೋದಕದಲ್ಲೇಕಭಾಜನವ ಮಾಡಿ,
ಪ್ರಸಾದವ ಕೊಟ್ಟು,
ಷಟ್ಸ್ಥಲವ ಹೇಳುವನೊಬ್ಬ ಜಂಗಮ
ಕೆಟ್ಟಗಣ್ಣವನೆಂಬೆನಯ್ಯಾ.
ಇಂತೀ ಅಧಮ ಗುರು-ಶಿಷ್ಯ-ಜಂಗಮಕ್ಕೆ
ಭವಬಂಧನ ತಪ್ಪದು ನೋಡಾ.
ಶಂಭುಕ್ಕೇಶ್ವರದೇವಾ,
ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ.
Art
Manuscript
Music
Courtesy:
Transliteration
Ayyā, guruśiṣyaribbaru puṇyapāpa,
ihaparaṅgaḷige
oḷagāda vicāraventendaḍe
satyasadācārasampattemba
śivabhaktara hr̥dayadalli janitanāgi
satyanaḍe naḍeyade,
lōkada jaḍajīviyante pan̄camahāpātakaṅgaḷalli
vartisuvuda kaṇḍu ada pariharisade,
dravyadabhilāṣeyinda
Trividhadīkṣeya māḍuvanobba guru
huṭṭandhakanembenayyā.
Antappa paramapātakaṅge japava hēḷi,
pādōdakadallēkabhājanava māḍi,
prasādava koṭṭu,
ṣaṭsthalava hēḷuvanobba jaṅgama
keṭṭagaṇṇavanembenayyā.
Intī adhama guru-śiṣya-jaṅgamakke
bhavabandhana tappadu nōḍā.
Śambhukkēśvaradēvā,
nīnoliyade keṭṭittī jagavella.