•  
  •  
  •  
  •  
Index   ವಚನ - 18    Search  
 
ಅಂದು ಅರಿಯಲಾದ ಆನಂದ ರೂಪಿನ ನಿಜವನು ತಂದೆನ್ನ ಕರಕ್ಷೇತ್ರದಲ್ಲಿ ಬಿತ್ತಿದ, ಸದ್ಗುರುಸ್ವಾಮಿ. ಕೊಂಬೆ ಬೇರಾಗಿ ಬೇರು ಕೊಂಬೆಯಾಗಿ ಫಲಂಗಳಾರಾದವು. ಆ ಫಲ ಗುರುವಿಂಗೊಂದು ಲಿಂಗಕ್ಕೊಂದು ಉಳಿದ ನಾಲ್ಕ ಜಂಗಮಕ್ಕಿತ್ತು ಹಿಂದು ಮುಂದುಗೆಟ್ಟ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Andu ariyalāda ānanda rūpina nijavanu tandenna karakṣētradalli bittida, sadgurusvāmi. Kombe bērāgi bēru kombeyāgi phalaṅgaḷārādavu. Ā phala guruviṅgondu liṅgakkondu uḷida nālkū jaṅgamakkittu hindu mundugeṭṭa kapilasid'dhamallikārjuna.