•  
  •  
  •  
  •  
Index   ವಚನ - 21    Search  
 
ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು ಅನುಭವದವಳಿಗೆ[ಕೆಂಪುವರ್ಣ] ಸುಖವನೇಕೀಕರಿಸಿ ನೋಡಲು ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು ಪರಿಣಾಮವಿಡಿದು ನಡೆಯೆ, ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನ ಧರ್ಮದಿಂ ಬದುಕಿದೆನು.
Transliteration Andhakārada giri arivēritu anuviḍidu sukhava kaṇḍu anubhavadavaḷige[kempuvarṇa] sukhavanēkīkarisi nōḍalu āyatavāyittu ī andhakārada eraḍesaḷapīṭha ā pīṭhadalli samayācāriyembava nindu pariṇāmaviḍidu naḍeye, ātmana guṇa keṭṭu nelegoṇḍanayyā nim'ma śaraṇa cennabasavaṇṇanu. Kapilasid'dhamallināthayya, cennabasavaṇṇana dharmadiṁ badukidenu.