•  
  •  
  •  
  •  
Index   ವಚನ - 20    Search  
 
ಅಂದೊಮ್ಮೆ ಜಗನ್ನಾಥ ಭಸ್ಮವ ತೊಡೆದು ಕೈಯ ಬಿರ್ಚಿದರೆ ಕೇಳಿರಣ್ಣ! ಅಣ್ಣ! ಅಣ್ಣ ಕೇಳಿರಣ್ಣ! ಬ್ರಹ್ಮ ತಾ ಮರೆದೊರಗಿ ವಿಷ್ಣು [ತಾ] ಜುಮ್ಮೆಂದು ವೇದಗಳು ಮತಿಗೆಟ್ಟು ದೆಸೆಗೆ ಬಾಯ ಬಿಟ್ಟವಯ್ಯ! ಎನಿಸೆನಿಸು ಲೋಕಂಗಳು ಅನಿಸು ಬಾಯ ಬಿಟ್ಟವು! ಕೇಳಿರಣ್ಣ! ಅಣ್ಣ! ಅಣ್ಣ ಕೇಳಿರಣ್ಣ! ತಮ್ಮ ಬಲ ಅವಕುಂಟು ಕೇಳಿರಣ್ಣ! ಆಯುಷ ತನಿಗೆನಿಸೆಂಬುದವೈ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಕೈಯ ಸಬುದಕಣ್ಣ!
Transliteration Andom'me jagannātha bhasmava toḍedu kaiya bircidare kēḷiraṇṇa! Aṇṇa! Aṇṇa kēḷiraṇṇa! Brahma tā maredoragi viṣṇu [tā] jum'mendu vēdagaḷu matigeṭṭu desege bāya biṭṭavayya! Enisenisu lōkaṅgaḷu anisu bāya biṭṭavu! Kēḷiraṇṇa! Aṇṇa! Aṇṇa kēḷiraṇṇa! Tam'ma bala avakuṇṭu kēḷiraṇṇa! Āyuṣa tanigenisembudavai enna kapilasid'dhamallināthayyana kaiya sabudakaṇṇa!