Index   ವಚನ - 55    Search  
 
ಅಭ್ಯಾಸದ ಅನುಭಾವಿಗಳಿಗೆ ಅಧಿಕಭಕ್ತಿ ಎಂತಪ್ಪುದಯ್ಯಾ? ವಾಕ್ಯದಲ್ಲಿ ನುಡಿದು, ಕಾಯದಲ್ಲಿ ಮಾಡಲು ಭಕ್ತಿಯಪ್ಪುದೆ ಮಾನಸವು ಮುಟ್ಟದನ್ನಕ್ಕರ? ಮಾನಸ ಭಕ್ತಿಸಂಪನ್ನರಾದಡೆ ತಾವು ನೀನಪ್ಪುದೇನರಿದು? ಕಪಿಲಸಿದ್ಧಮಲ್ಲಿಕಾರ್ಜುನಾ.