ವಚನ - 74     
 
ಅಯ್ಯಾ, ನಿನ್ನ ಕರವೆಂಬ ಉರುತರ ಗರ್ಭದಲ್ಲಿ ಭವಿಸಿದೆನಯ್ಯಾ. ನಿನ್ನ ಕರುಣವೆ ಎನಗೆ ಮಹಾಕಾನನವಾಯ್ತು. ಲೋಕದ ಪಾತಕಿಗಳು ಉಂಡಂತೆ ಉಂಡೆನಾದಡೆ, ಬಂದಂತೆ ಬಂದೆನಾದಡೆ ನಿಜ ನಿಮ್ಮಾಣೆ, ಕಪಿಲಸಿದ್ಧಮಲ್ಲಿಕಾರ್ಜುನಾ.