ಅಷ್ಟಮ ಬ್ರಹ್ಮಕ್ಕೆ ಪಟಗಟ್ಟಿತ್ತು, ಮಾತೆ
ಹೆತ್ತು ಹೆಸರಿಟ್ಟಿತೈ, ಅಕ್ಷರಾಂಕ
ಆರುವನು ಐದುವನು ಮೇಲಪ್ಪ ಮೂರುವನು
ಕೂಡೆ ಹದಿನಾಲ್ಕರೊಳು ಲೋಕವಾಗೆ;
ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ
ಅನೇಕ ಪರಿಯಿಂ ಮಾತೆ ಬಸವಾಕ್ಷರ.
ಅನಾದಿ ಮುಖಶೂನ್ಯವಾಗಿಪ್ಪ ಲಿಂಗವನು
ಖ್ಯಾತಿ ಮಾಡಿದ ಬಸವ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Art
Manuscript
Music
Courtesy:
Transliteration
Aṣṭama brahmakke paṭagaṭṭittu, māte
hettu hesariṭṭitai, akṣarāṅka
āruvanu aiduvanu mēlappa mūruvanu
kūḍe hadinālkaroḷu lōkavāge;
ēkaika rudra ninnākāra catuṣṭayake
anēka pariyiṁ māte basavākṣara.
Anādi mukhaśūn'yavāgippa liṅgavanu
khyāti māḍida basava,
kapilasid'dhamallikārjunayya.