ಆನಂದಸ್ಥಾನದಲ್ಲಿ, ಶುದ್ಧಧವಳ ಮನೆಯಲ್ಲಿ,
ನಿತ್ಯ ಜಾಗರವ ಮಾಡುವ ಅವ್ವೆ ನೀ ಕೇಳಾ.
ಬಂದವರ ಬಲ್ಲ ಹೋದವರ ಬಲ್ಲ
ಬಂದವರು[ಬರಿದೆ] ಹೋದರು
ಭವಕ್ಕೆ ಹೇತುವಾಗಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಾಣದೆ.
Transliteration Ānandasthānadalli, śud'dhadhavaḷa maneyalli,
nitya jāgarava māḍuva avve nī kēḷā.
Bandavara balla hōdavara balla
bandavaru[baride] hōdaru
bhāvakke hētuvāgi
kapilasid'dhamallikārjunayyana kāṇade.