ವಚನ - 186     
 
ಆನೆಯ ಕಾವವನ, ಆಡ ಕಾವವನ ಅಂತರವನರಿ ಕಂಡಾ. ಕೋಡಗನ ಪರಿಯಲಿ ಕುಳ್ಳಿರಲು ನೀನು ಕಲಿ ಕಂಡಾ. ಮರುಳಿನ ಮನದ ಪರಿಯನರಿ ಕಂಡಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಕತ್ತಲೆಯೆಂಬುದ ಕಳೆ ಕಂಡಾ, ಮಕ್ಕಳ ಮತವನರಿ ಕಂಡಾ.