Index   ವಚನ - 199    Search  
 
ಆರೂ ಕಾಣಬಾರದ ಪ್ರಸಾದ ಅಡಕವಾಯಿತ್ತು ಅರುಹಿನಲ್ಲಿ ಚೆನ್ನಬಸವಣ್ಣಾ. ಈ ಪ್ರಸಾದವ ನಿಮ್ಮ ಸುಳುಹಿನಲ್ಲಿ ತೋರಿದೊ, ನಿಮ್ಮ ನೆನಹಿನಲ್ಲಿ ತೋರಿದೊ? ತೋರುವ ಪ್ರಸಾದ ತೋರದೆ ಹೋಯಿತ್ತೆಂಬುದೇನಯ್ಯಾ, ಚೆನ್ನಬಸವಣ್ಣಾ? ಕಾಯವಿಡಿದ ಪ್ರಸಾದ ಕರಣಂಗಳಿಗೆ ಹೋಯಿತ್ತೆಂಬುದೇನಯ್ಯಾ, ಚೆನ್ನಬಸವಣ್ಣಾ? ಲಾಭಕ್ಕೆ ವ್ಯವಹರಿಸಲು ನಷ್ಟವಾಗಿದೆ; ಈ ನಷ್ಟ ತುಷ್ಟಿಯ ಕೂಡಿಕೊಂಡು ನಿನ್ನಲ್ಲಿ ನೀ ಪ್ರಸಾದಿಯಾಗಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮದಲ್ಲಿ ಚೆನ್ನಬಸವಣ್ಣನಿಂದ ನಿಜಪ್ರಸಾದಿಯಾದೆನಾಗಿ ನಿಮ್ಮ ಹರಿಯ ಕೊಂದೆ.