ಆರೇನೆಂದಡೂ ಓರಂತಿಪ್ಪುದೆ ಸಮತೆ.
ಆರು ಜರಿದವರೆನ್ನ ಮನದ ಕಾಳಿಕೆಯ
ಕಳೆದರೆಂಬುದೆ ಸಮತೆ.
ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ
ಹಗೆಗಳೆಂಬುದೆ ಸಮತೆ,
ಇಂತು ಗುರುಕಾರುಣ್ಯ,
ಮನವಚನಕಾಯದಲ್ಲಿ ಅವಿತಥವಿಲ್ಲದಿರ್ದಡೆ,
ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನವರ
ನೀನೆಂಬುದೆ ಸಮತೆ.
Transliteration Ārenendadū orantippude samate.
Āru jaridavarenna manada kāḷikeya
kaḷedarembude samate.
Āru stautyava māḍ'̔iharenna janmajanmada
hagegaḷembude samate,
intu gurukāruṇya,
manavacanakāyadalli avitathavilladirdaḍe,
kapilasid'dhamallikārjunā, ninnavara
nīnembude samate.