ವಚನ - 228     
 
ಆಳುವ ಅರಸನಾ ಹೆಂಡತಿಯ ಹಾದರಗಿತ್ತಿಯೆಂದಡೆ ಆಳುವ ಅರಸು ಕೈಕಾಲನು ತರಿಸದೆ ಬಿಡುವನೆ? ಶರಣಸತಿ ಲಿಂಗಪತಿಯಪ್ಪ ಶಿವಭಕ್ತನ ಅಂತವನಿಂತವನೆಂದಡೆ, ಅಘೋರ ನರಕದಲ್ಲಿಕ್ಕುವನವ್ವಾ, ನಮ್ಮ ಕಪಿಲಸಿದ್ಧಮಲ್ಲಿನಾಥ.