•  
  •  
  •  
  •  
Index   ವಚನ - 227    Search  
 
ಆಸೆಯೆಂಬವಳು ಆರನಾದಡೆಯೂ ತನ್ನತ್ತಲೆಳೆವಳು ನೋಡಾ, ಈ ಆಸೆಯೆಂಬವಳು ಅವರಿವರೆನ್ನದೆ ಆರನಾದಡೆಯೂ ಕೊಲಲಿಕೆ ಬಗೆವಳು. ಈ ಆಸೆಯೆಂಬವಳಿಂದವೆ ನಿಮ್ಮಡಿಗಾಣದಿಪ್ಪೆ. ಈ ಆಸೆಯೆಂಬವಳನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದಂತಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āseyembavaḷu āranādaḍeyū tannattaleḷevaḷu nōḍā, ī āseyembavaḷu avarivarennade āranādaḍeyū koḷalike bagevaḷu. Ī āseyembavaḷindave nim'maḍigāṇadippe. Ī āseyembavaḷanendiṅge nīgi, endu nim'manoḍagūḍi bērāgadantippenō enna kapilasid'dhamallikārjunā.