Index   ವಚನ - 247    Search  
 
ಇಪ್ಪತ್ತುನಾಲ್ವರು ಚವುಕವ ಹೊಕ್ಕಾರು. ಆ ಚವುಕ ನಾಗರಕಟ್ಟೆಗೆ ಒಲೆದೀತು. ಆ ನಾಗರಕಟ್ಟೆಯಲ್ಲಿ ಇಪ್ಪತ್ತು ನಾಲ್ವರು ದುಃಖಪಟ್ಟಾರು. ನುಚ್ಚಿನ ನುಚ್ಚು ಕೊನೆನುಚ್ಚು ಮೂಗಂಡುಗವಾದಾವು. ಚಿಟ್ಟೆಯ ಹುಳು ಬಾಣಸಕ್ಕೆ ಬಂದಾವು. ಲೋಕಕ್ಕೆ ಕೆಂಡದ ಮಳೆ ಸುರಿದಾವು. ಹದಿನೆಂಟು ಜಾತಿಯೆಲ್ಲ ಏಕವರ್ಣವಾದೀತು. ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ರಾಯರುಗಳೆಲ್ಲಾ ಗುಡ್ಡರುಗಳಾಗಿ ನಡೆದಾರು. ಕಪಿಲಸಿದ್ಧಮಲ್ಲಿಕಾರ್ಜುನದೇವರು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಲಿಂಗವ ಕಲಿಯಾಯಿತು ಕಲಿಯಾಯಿತು [ಕಲಿಯುಗದೊಳಗೊಂದು ಸೋಜಿಗವ ಕಂಡೆನು.] ಸತ್ಯ ಸತ್ತೀತು, ಸಾತ್ವಿಕವಡಗೀತು, ಠಕ್ಕು ಠವಳಿ ಮುಂಡು ಮುರುಹು ಗನ್ನ ಘಾತಕ ಹದುರು ಚದುರು ಭೂಮಂಡಲವೆಲ್ಲಾ ಆದೀತು. ಆಗಳೆ ಭಕ್ತರು, ಆಗಳೆ ಭವಿಗಳು ಅಂಗೈ ಮೇಗೈಯಾದರಲ್ಲಾ. ನಿಜಗುರು ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ.