ಇವನ ಪರಿಯ ಗಂಡುಗೂಸು ಪೃಥುವಿಯ ಮೇಲಿಲ್ಲವಯ್ಯಾ,
ಅವ್ವಾ, ಗಂಡುಮಕ್ಕಳು ಗಂಡುಬೇಟಗೊಂಬರು.
ಹೆಮ್ಮಕ್ಕಳು ಹೆಂಬೇಟಗೊಂಬರು.
ಇವಗೆ ಕೂರದವರಾರು? ಹೇಳಾ! ಅವ್ವಾ! ಅಯ್ಯಾ!
ಜಗದ ಗಂಡರ ಹೆಂಡಿರು ಇವನ ಮೇಲೆ
ಮೂಗೂರಿಕೊಂಡಿಪ್ಪರು,
ಕಪಿಲಸಿದ್ಧಮಲ್ಲಿನಾಥಯ್ಯನವ್ವಾ.
Art
Manuscript
Music
Courtesy:
Transliteration
Ivana pariya gaṇḍugūsu pr̥thuviya mēlillavayya,
avvā, gaṇḍumakkaḷu gaṇḍubēṭagombaru.
Hem'makkaḷu hembeṭagombaru.
Ivage kūradavarāru? Hēḷā! Avvā! Ayyā!
Jagada gaṇḍara heṇḍiru ivana mēle
mūgūrikoṇḍipparu,
kapilasid'dhamallināthayyanavvā.