•  
  •  
  •  
  •  
Index   ವಚನ - 299    Search  
 
ಎನಿತುಂ ತ್ರಿಭುವನಂಗಳು ತನಗಾದಡೆ ಅನಿತರಲಿ ತುಷ್ಟಿವಡೆಯಳು, ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Enituṁ tribhuvanaṅgaḷu tanagādaḍe anitarali tuṣṭivaḍeyaḷu, ī āseyembavaḷindave nim'meḍegāṇadippenu. Ī āseyembavaḷanendiṅge nīgi endu nim'manoḍagūḍi bērāgadendippeno kapilasid'dhamallikārjunā.