ವಚನ - 315     
 
ಎಲ್ಲರ ಪರಿಯಲ್ಲ ಎಮ್ಮ ಗಂಡನ ಪರಿ. ಒಬ್ಬರು ಬಲ್ಲುದ ತಾನರಿಯ, ತಾ ಬಲ್ಲುದನೊಬ್ಬರರಿಯರು. ತವಕ ಬಂದಲ್ಲಿ ಕೂಡುವ, ಅಲ್ಲದಡೊಲ್ಲದ ಹಾಂಗಿರ್ಪ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು.