•  
  •  
  •  
  •  
Index   ವಚನ - 323    Search  
 
ಎಲೆ ಅಯ್ಯಾ, ನಿನ್ನ ಬೆಳಗಿನ ಪರಿಯ ಕೇಳು ಕಂಡಾ. ನಾನಾರೆಂಬುದ ತಿಳಿದು ನೋಡಿ ಕಂಡು ಕಂಡು ಬೆಳಗ ಕಾಬ ಪರಿ ಎಂತು ಹೇಳಾ. ಕಂಡುದ ಕಂಡು ಕಾಯದೊಳಗೆ ಸಂತವಿಡುವ ಪರಿ ಎಂತಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ, ನೀನೆನ್ನ ಮನವ ತಿಳಿವಡೆ ಅಸಾಧ್ಯವುಂಟೆ ದೇವರ ದೇವಾ?
Transliteration Ele ayyā, ninna beḷagina pariya kēḷu kaṇḍā. Nānārembuda tiḷidu nōḍi kaṇḍu beḷaga kāba pari entu hēḷā. Kaṇḍu kāyadoḷage santaviḍuva pari entayyā? Kapilasid'dhamallināthayya, nīnenna manava tiḷivaḍe asādhyavuṇṭe dēvara dēvā?