ಎಲೆಯವ್ವ, ಎಲೆ ಎಲೆಯವ್ವ,
ಹುಟ್ಟಿದ ಮಕ್ಕಳು ತಂದೆಗೆ ಬೇಟಗೊಂಬರೆ? ಅಯ್ಯಾ.
ಎಲೆಯವ್ವ, ಎಲೆ ಎಲೆಯವ್ವ,
ಹೆತ್ತ ಮಕ್ಕಳ ಕೈವಿಡಿವರೆ? ಎಲೆಯವ್ವ.
ಪಾಪವಿನಾಶಿ ನೀನಾಗಿ ನಿನಗೆ ಮೂಗಿನಳೈವ ದೆಸೆ ಕಾಣ!
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Eleyavva, ele eleyavva,
huṭṭida makkaḷu tandege bēṭagombare? Ayyā.
Eleyavva, ele eleyavva,
hetta makkaḷa kaiviḍivare? Eleyavva.
Pāpavināśi nīnāgi ninage mūgināḷaiva dese kāṇa!
Enna kapilasid'dhamallināthayya.