ವಚನ - 331     
 
ಎಸಳ ಕುಸುಮದಿಂದಲತ್ತ ಪಸರಿಸಿತು. ಪಂಕವೆಂಬ ದೆಸೆ ಇದ್ದೆಸೆಗೆಟ್ಟರಾಡುವ ಪರಿಯನೆನಗೆ ತೋರದಿರಯ್ಯ. ಇದ್ದೆಸೆಯ ಮುದ್ದೆಸೆಯನೊದ್ದೆಸೆಯ ಮಾಡಿ ಸಲಹು ಕಪಿಲಸಿದ್ಧಮಲ್ಲಿಕಾರ್ಜುನಾ.