ಒಂದೊಂದು ಮಠದಲ್ಲಿ
ತುಂಬಿ ಒಂಬತ್ತರಾಳಾಪ
ಸಂಭ್ರಮ ಮೊರೆವುತದೆ ಅಯ್ಯಾ.
ಆನತದ ಮೀರಿಪ್ಪ
ಮೇಣು ಆದಿಯ ಆಧಾರದಿಂದತ್ತಲಿ
ತುಂಬಿದಾ ಕೊಡದಲಿ ಒಂದು ಬಿಂದು ಭವಿಸಲು
ಸಂದುದಖಿಳ ಬ್ರಹ್ಮಾಂಡವು.
ಎನ್ನ ತಂದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ನಿಮ್ಮ ಭಕ್ತಿಯಾದಂದ ವಾರುಧಿಯ ಪರಿಯಾಯ.
Transliteration Ondondu maṭhadalli
tumbi ombattarāḷāpa
sambhrama morevutade ayyā.
Ānatada mīrippa
mēṇu ādiya ādhāradindattali
tumbida koḍadali ondu bindu bhavisalu
sandudakhiḷa brahmāṇḍavu.
Enna tande, kapilasid'dhamallikārjunayya
nim'ma bhaktiyinda vārudhiya pariyāya.