ವಚನ - 366     
 
ಒಂದೊಂದು ಪರಿಯ ಪ್ರಕೃತಿಯ ಬೊಂಬೆಗಳಾಡಲಿಕೆ ಕಂಡೂ ಕಾಣದಂತೆ ಸೀಯ್ಯರವರು. ಗಂಡುಗಲಿ ಕಾಮನನು ಭಂಡುಮಾಡಿಯೆ ತಗುಳ್ದ ಗಂಡುಗಲಿ ಶರಣರಾಳಯ್ಯಾ ನಾನು. ಕಾಮಹರ ನಿಸ್ಸೀಮ ಕಪಿಲಸಿದ್ಧಮಲ್ಲೇಶಾ, ಶರಣು ಶರಣೆಂಬೆನಯ್ಯಾ ನಿಮ್ಮವರ ಶ್ರೀಚರಣಕ್ಕೆ.