ವಚನ - 379     
 
ಓರಂತೆ ಮಾಡಯ್ಯಾ ನಿನ್ನ ನಿನ್ನವರೊಳಗೆ ಮನ್ನಣೆಯಿಂದ ಮಚ್ಚಿಸಯ್ಯಾ, ನಿನ್ನವರ ಪಾದೋದಕವ ನಚ್ಚಿಸಯ್ಯಾ, ನಿನ್ನವರ ಪ್ರಸಾದವ ನಚ್ಚಿಸಿ ಮಚ್ಚಿಸಿ ಮನಕ್ಕೆ ನೀನೇ ಮಂಗಳವಾಗಿ ಅಚ್ಚಿಗಬಡಿಸದಂತಿರಿಸಾ ಕಪಿಲಸಿದ್ಧಮಲ್ಲಿಕಾರ್ಜುನಾ.