ಕಂಗಳ ಬೇಟೆಯನಾಡುವ ಕಾಮನ ಸಂಗಕ್ಕೆನ್ನ ಸಲಿಸದೆ,
ಮಂಗಳಮಯವಪ್ಪ ಉರುತರ
ಭಕುತಿಯ ಸಂಗಕ್ಕೆನ್ನ ಸಲಿಸಯ್ಯಾ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kaṅgaḷa bēṭeyanāḍuva kāmana saṅgakkenna salisade,
maṅgaḷamayavappa urutara
bhakutiya saṅgakkenna salisayyā,
anaṅgavidāraṇa kapilasid'dhamallikārjunā.