ಕರ್ಮದ ಗಡಣ ಹಿಂಗಿಸು; ಪಾಪದ ರಾಶಿಯ ತೊಲಗಿಸು;
ಸಂಸಾರದಾಶೆಯ ಬೆಂದ ಮನದ ಕಾಟವ ಮಾಣಿಸು.
ಮಾಯದ ತಲೆಯನರಿದು ಮರಳಿ ಬಾರಾ ಎನ್ನ ಕರಕ್ಕೆ,
ನಿಮ್ಮ ಧರ್ಮ.
ನಿಮಗಾಣೆ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karmada gaḍaṇa hiṅgisu; pāpada rāśiya tolagisu;
sansāradāseya benda manada kāṭava māṇisu.
Māyada taleyanaridu maraḷi bāra enna karakke,
nim'ma dharma.
Nimagāṇe guruve, kapilasid'dhamallikārjunā.