ವಚನ - 437     
 
ಕಾಮಿನಿಯೆಂಬಾಯಕನ ಕರದಲ್ಲಿ ಒಪ್ಪಿಹ ಲೋಕಂಗಳು ಹಲವು ಕಂಡಾ, ಅವ್ವ. ಶೂಲದಾಕೃತಿಯಲ್ಲಿ ಮುನ್ನೂರು ದಳದಲ್ಲಿ ಮೋಹಿಸುತ್ತಿರ್ದವು ಕಂಡಾ, ನಾಮ ನಾಮವೆಂಬುದರೊಳಗೆ ನಿರ್ನಾಮವಾಗಿದ್ದ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.