•  
  •  
  •  
  •  
Index   ವಚನ - 447    Search  
 
ಕಾಲವೇಕೆ ಬಾರದಯ್ಯಾ ಇಂದಿನ ಅವಸ್ಥೆಗೆ? ಲಿಖಿತವೇಕೆ ತೊಡೆಯದಯ್ಯಾ ಇಂದಿನ ಅವಸ್ಥೆಗೆ? ಇಂದಿನಿಸು ಬಾರದೇಕಯ್ಯಾ, ಎನ್ನ ದೇವ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮಗೆ ಕೂರ್ತ ಅವಸ್ಥೆಯೊಳಗೆ? ಲಿಖಿತ ತೊಡೆಯದು, ಪ್ರಾಣ ಬಿಡದು, ಇಂತಿರಿಸದಿರಾ, ಎನ್ನದೇವರ ದೇವಾ.
Transliteration Kālavēke bāradayyā indina avasthege? Likhitavēke toḍeyadayya indina avasthege? Indinisu bāradēkayyā, enna dēva kapilasid'dhamallikārjunā, nimage kūrta avastheyoḷage? Likhita toḍeyadu, prāṇa biḍadu, intirisadirā, ennadēvara dēvā.