•  
  •  
  •  
  •  
Index   ವಚನ - 450    Search  
 
ಕಾಳರಕ್ಕಸಿ[ಯಾಗಿ] ಕುತ್ತಿಗೆ ಪಿಡಿದು ಕೊಯ್ದು ತಿನ್ನುತ್ತಿರಲಿ. ತಿನ್ನಲೊಲ್ಲದೆಚ್ಚಿ ಭರದಿಂದ ಕನ್ನಿಕೆಯಾಗಿ ತೆಗೆದಪ್ಪಿ [ಕೊಳ್ಳಲಿ] ಕೊಂಡಡೆ, ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāḷarakkasi[yāgi] kuttige piḍidu koydu tinnuttirali. Tinnalolladecci bharadinda kannikeyāgi tegedappi [koḷḷali] koṇḍaḍe, manavi cchandavāgadondeḍeyallippantappa nim'madondu samatāguṇa ennanendu bandu poddipudu hēḷā, kapilasid'dhamallikārjunā.