Index   ವಚನ - 521    Search  
 
ಚೌಗ್ರಾಮಕೊಳದಲ್ಲಿ ಎಸೆವ ಚಾದಗವಕ್ಕಿ ಒಸರುವಮೃತವನು ಕೊಳ್ಳಾ. ಸೀಮೆಗೆಟ್ಟ ಅಮೃತವನು ಆರೈದು ಕೊಳಬಲ್ಲಡೆ ಇದ್ದೆಸೆಯ ಸೀಮೆಗೆಡುವೆ ನೀನು ಕಂಡಾ. ಮರಾಳ ಮರಾಳನೆಂಬ ಹಕ್ಕಿ ಹಾರದ ಮುನ್ನ ನೀನೆಯ್ದು ಅವ್ಯಯ ಪದವ ಕಪಿಲಸಿದ್ಧಮಲ್ಲಿನಾಥನೆಂಬ ಸುಖಸಮುದ್ರದಲಾಳಾ.