•  
  •  
  •  
  •  
Index   ವಚನ - 547    Search  
 
ಜ್ಞಾನಿಗಳು ತಾವಾದ ಬಳಿಕ ವಿಶ್ವಾಸಘಾತವ ಮಾಡಬಾರದು. ಜ್ಞಾನಿಗಳು ತಾವಾದ ಬಳಿಕ ಪರದೂಷಣೆ ಮಾಡಬಾರದು. ಜ್ಞಾನಿಗಳು ತಾವಾದ ಬಳಿಕ ಪರದ್ರವ್ಯವನಪಹರಿಸಬಾರದು. ಜ್ಞಾನಿಗಳು ತಾವಾದ ಬಳಿಕ ಗುರುಸೇವೆಯಲ್ಲಿರಬೇಕು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānigaḷu tāvāda baḷika viśvāsaghātava māḍabāradu. Jñānigaḷu tāvāda baḷika paradūṣaṇe māḍabāradu. Jñānigaḷu tāvāda baḷika paradravyavanapaharisabāradu. Jñānigaḷu tāvāda baḷika gurusēveyallirabēku kapilasid'dhamallikārjunā.