ಜ್ಞಾನಿಗಳು ನಾವೆಂದು ಕಂಡಂತಾಚರಿಸಿದಡೆ ಜ್ಞಾನಿಗಳಲ್ಲ.
ಆರೂಢ ನಾವೆಂದು ಕಂಡ ಕಂಡಂತಾಚರಿಸಿ
ಕಂಡಲ್ಲಿ ತಿಂದಡೆ ಆರೂಢರೆ ಅವರಲ್ಲ.
ಜ್ಞಾನಿಯ ಪರಿ ಬೇರೆ, ಆರೂಢನ ಪರಿ ಬೇರೆ,
ಪರಮಹಂಸನ ಪರಿ ಬೇರೆ.
ಅರಿತಡೆ ಹೇಳಾ, ಅರಿಯದಿರ್ದಡೆ ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನನ
ಸಾನ್ನಿಧ್ಯದಲ್ಲಿ, ಕೇದಾರಯ್ಯಾ.
Transliteration Jñānigaḷu nāvendu kaṇḍācarisidaḍe jñānigaḷalla.
Ārūḍha nāvendu kaṇḍa kaṇḍācarisi
kaṇḍalli tindaḍe ārūḍhare avaralla.
Jñāniya pari bēre, ārūḍhana pari bēre,
paramahansana pari bēre.
Aritaḍe hēḷā, ariyadirdaḍe kēḷā,
kapilasid'dhamallikārjuna
sānnidhyadalli, kēdārayya.