ತತ್ವಮಸಿಯೆಂಬ ವೃಕ್ಷದ ಕೆಳಗೆ ದ್ವಯವಿಲ್ಲವೆಂದು
ಏಕಏಕವೆಂದು ಆಡುತ್ತೈದಾನೆ.
ಅದು ನಿತ್ಯಮುಕ್ತಿ, ಅದೆ ವಿಸ್ತಾರವೆಂದು ಆಡುತ್ತೈದಾನೆ.
ಈಡಾ ದ್ವಾರಕ್ಕೆ ಹೋದಿರಾದಡೆ
ನಾಲ್ವರ ಮೂಲ ನಾಶವ ಮಾಡಿ,
ಅವ್ವೆಯ ಸರ್ವಾಂಗವಂ ಸೂರೆಗೊಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೊಡಗೂಡಿದರೆ
ಗಿರಿಯ ಮೇಲಣ ದುರ್ಗವಂ ಬಲ್ಲೆ.
Transliteration Tatvamasiyemba vr̥kṣada keḷage dvayavillavendu
ēka'ēkavendu āḍuttaidāne.
Adu nityamukti, adē vistāravendu āḍuttaidāne.
Īḍā dvārakke hōdirādaḍe
nālvara mūla nāśava māḍi,
avveya sarvāṅgavaṁ sūregoṇḍu
kapilasid'dhamallikārjunayyanoḍagūḍidare
giriya mēlaṇa durgavaṁ balle.