ವಚನ - 557     
 
ತತ್ವಮಸಿಯಿಂದತ್ತ ಮಿಥ್ಯವಾಗಲು ಯೋಗ, ತಥ್ಯವಾಯಿತು ನಿತ್ಯ ಭಕ್ತಿಯೋಗ, ಮಿಥ್ಯವಪ್ಪೀ ದೇಹ ನಿತ್ಯಕಾಯವಪ್ಪುದ ಕಂಡು, ಮತ್ತೆ ನಚ್ಚಿ ಒಚ್ಚತವೋದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.