•  
  •  
  •  
  •  
Index   ವಚನ - 579    Search  
 
ತನುಮನ ಮಧ್ಯದಲ್ಲಿ ಘನಸಿಂಹಾಸನವನಿಕ್ಕಿ [ದಿ]ನವನೆಣಿಸುತ್ತಿರ್ಪೆನಯ್ಯಾ, ಒಂದೊಂದು ಒಂದೊಂದೆನುತ್ತ, ಆನಂದಪದವ ನೆನಸುತ್ತ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಸಂದು ಸವೆದು ಬೆರಸುವೆನಯ್ಯಾ.
Transliteration Tanumana madhyadalli ghanasinhāsanavanikki [di]navaneṇisuttirpenayyā, ondondu ondondenutta, ānandapadava nenasutta ayyā, kapilasid'dhamallikārjunayya, nim'ma sandu savedu berasuvenayyā.