•  
  •  
  •  
  •  
Index   ವಚನ - 581    Search  
 
ತನುಮಧ್ಯ ವಿದಳಾಚಲದೊಳಗೆ ಭಾಸ್ಕರಭವನ ಬೆಳಗುತಿಪ್ಪುದು ಲೋಕ ಹದಿನಾಲ್ಕರಲಿ ಅಜಲೋಕದೊಳಗೆ ಆತ ಬೆಳಗುವ ಪ್ರಜ್ವಲದ ಪ್ರಭೆಯ ಮಂಟಪವು ತಾನೆರಡಾಗುತ ದಿವ ರಾತ್ರೆ ಒಡಗೂಡಿ ಭರಿತ ಪರಿಮಳವಾಗೆ ವಳಯ ಹದಿನಾಲ್ಕುರೊಳು ಬೆರೆಸಿಪ್ಪ ಜ್ಯೋತಿಯನು ತಿಳಿದು ನೋಡಿದಡತ್ಯಧಿಕ ಸರ್ವಜ್ಞನೆನಿಪ ಲೋಕಾಲೋಕವ ಏಕವ ಮಾಡಲಿಕಾತ ಆಕಾರ ಚತುಷ್ಟಯವ ಮೀರಿದಾತ ವರ್ಣಾಶ್ರಮವ ಕಳೆದು ನಿರ್ಮಳಾನಂದದೊಳು ಸೊಮ್ಮುಗೆಟ್ಟಾತ ಪರಶಿವ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanumadhya vidaḷācaladoḷage bhāskarabhavana beḷagutippudu lōka hadinālkarali ajalōkadoḷage āta beḷaguva prajvalada prabheya maṇṭapavu tāneraḍāguta diva rātre oḍagūḍi bharita parimaḷavāge vaḷaya hadinālkuroḷu beresippa jyōtiyanu tiḷidu nōḍidaḍatyadhika sarvajñanenipa lōkālōkava ēkava māḍalikāta ākāra catuṣṭayava mīridāta varṇāśramava kaḷedu nirmalānandadoḷu som'mugeṭṭāta paraśiva kapilasid'dhamallikārjunā.