ವಚನ - 594     
 
ತಮ್ಮೊಲಿದತ್ತ ಹರಿಹಂಚಮಾಡಿ ಕಾಡುತ್ತಿಪ್ಪ ಎನಿತೆನಿತಿಂದ್ರಿಯಂಗಳ ಒಡಗಡಣದಲು ಪೋಗದೆಂದಿಪ್ಪೆಯೆಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನೊ? ಕಪಿಲಸಿದ್ಧಮಲ್ಲಿಕಾರ್ಜುನಾ.