Index   ವಚನ - 597    Search  
 
ತಲೆಯನುರಸ್ಥಲಕ್ಕೆ ಬಚ್ಚಿಡುವಳೀ ಶಿಶು ಕಣ್ಣಲುಂಬಳು. ಮಗಳ ಕಣ್ಣಲ್ಲಿ ದಹಿಸುವಳು ಇವಳು ಬಾಯಲಾದರೆ ಹಿಡಿದುಂಡಹಳೆಂದು ನಾಸಿಕದಲುಂಬಂತೆ ಮಾಡಿದ, ಕಪಿಲಸಿದ್ಧಮಲ್ಲಿನಾಥಯ್ಯ.