ತಾಮಸದಲ್ಲಿ ತಾಮಸಿಯಾಗಿ,
ಸೀಮೆಗೆಟ್ಟಲ್ಲಿ ಸಂಬಂಧಿಯಾಗಿ,
ಅನಿಮಿಷ ಮೀರಿದಲ್ಲಿ ಆಂದೋಳವಾಗಿ,
ಸೀಮೆಗೆಟ್ಟಲ್ಲಿ ಕುರುಹು ತಾನಾಗಿ,
ಮಹಾರ್ಣವದಲ್ಲಿ ಮಧ್ಯ ತಾನಾಗಿ,
ಎಲ್ಲಾ ಭೂತಕ್ಕೆ ದಯವುಳ್ಳ ಮಹಾಭೂತಿ ತಾನಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ
ನಿತ್ಯ ಲಿಂಗಾರ್ಚನೆಯ ಮಾಡುವ
ಶಿವಯೋಗಿಯ ಪರಿಯಿಂತುಟು.
Transliteration Tāmasadalli tāmasiyāgi,
sīmegeṭṭalli sambandhiyāgi,
animiṣa mīridalli āndōlanavāgi,
sīmegeṭṭalli kuruhu tānāgi,
mahārṇavadalli madhya tānāgi,
ellā bhūtakke dayavuḷḷa mahābhūti tānāgi,
kapilasid'dhamallikārjunayyanalli
nitya liṅgārcaneya māḍuva
śivayōgiya pariyintuṭu.