ತೃಪ್ತವ ಮಾಡಿ ಮಾಡಿ ತನಗೆ ಬೇಕೆನ್ನ ಪ್ರಸಾದಿ,
ಬಂದುದನತಿಗಳೆದು ಅಲ್ಲವೊಲ್ಲೆನೆನ್ನ ಪ್ರಸಾದಿ,
ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ
ಬಪ್ಪನೆಂಬ ರೂಪಿನಲ್ಲಿ
ಲೋಪವ ಮಾಡಿದ ಪ್ರಸನ್ನ ಪ್ರಸಾದಿ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಬಸವಣ್ಣನು.
Transliteration Tr̥ptava māḍi māḍi tanage bēkenna prasādi,
bandudanatigaḷedu allavollenenna prasādi,
tānemba rūpa ayyanemba rūpinalli
bappanemba rūpinalli
lōpava māḍida prasanna prasādi kāṇā,
kapilasid'dhamallikārjunayya basavaṇṇanu.