Index   ವಚನ - 636    Search  
 
ದೂರದ ಬಟ್ಟೆಯ ಹೋಗಿ ಪಥಶ್ರಾಂತನಾಗಿದ್ದು, ಹಿಂದೆ ತಿರುಗಿ ನೋಡದಿರು ಕಂಡಾ, ಎಲೆ ಗಂಡನೆ. ಹಿಂದೆ ತಿರುಗಿ ನೋಡಿದಲ್ಲಿ ಕೆಟ್ಟರು ಕೋಟಿ ಬ್ರಹ್ಮಜ್ಞರು, ಹಿಂದೆ ತಿರುಗಿ ನೋಡಿದಡೆ ಮುಂದೆ ವಿಸ್ತಾರವೆಂದಿದ್ದೆಯಾದಡೆ ತಂದೆ ಒಲಿವ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.