•  
  •  
  •  
  •  
Index   ವಚನ - 637    Search  
 
ದೂಷಣೆ ನಿಮಿತ್ತ ಲಿಂಗಧಾರಣಶಿಕ್ಷೆ ಎಂದಲ್ಲಿ, ಬರಿಯ ಪ್ರಾಣಲಿಂಗಿಗಳೆಂದು ದೂಷಣೆಯಾದುದಿಲ್ಲವೆ, ಪುರಾತರ ನುಡಿಯಲ್ಲಿ? ಇದು ಕಾರಣ, ಹಿರಿಯರಿಷ್ಟಲಿಂಗದ ಭಾವ ಧಾರಣಶಿಕ್ಷೆಯಾದಡೆ, ನಿಮ್ಮ ಶರಣ ಲಿಂಗಧಾರಣಶಿಕ್ಷೆ ಮನಮಾಳ್ಪ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dūṣaṇe nimitta liṅgadhāraṇaśikṣe enda mēle, bariya prāṇaliṅgigaḷendu dūṣaṇeyādudillave, purātara nuḍiyalli? Idu kāraṇa, hiriyariṣṭaliṅgada bhāva dhāraṇaśikṣeyādaḍe, nim'ma śaraṇa liṅgadhāraṇaśikṣe manamāḷpa kāṇā, kapilasid'dhamallikārjunā.